ಕಾಂಡಕೊರಕ ನೊಣ

 ಕೀಟವರ್ಗದ ಡಿಪ್ಟಿರ (ನೊಣ) ಗಣದ ಸೆಸಿಡೋಮೈಯಿಡೀ, ಅಗ್ರೋಮೈಜಿóಡೀ ಮತ್ತು ಆಂಥೊಮೈಯಿಡೀ - ಎಂಬ ಕುಟುಂಬಗಳಿಗೆ ಸೇರಿದ ನೊಣಗಳು (ಸ್ಟೆಮ್ ಬೋರರ್ ಫ್ಲೈ). ಇವುಗಳಲ್ಲಿ ಸೆಸಿಡೋಮೈಯಿಡೀ ಕುಟುಂಬದ ಪ್ಯಾಕಿಡಿಪ್ಲಾಸಿಸ್ ಒರೈಜೆó ಎಂಬ ನೊಣ ಭತ್ತದ ಕಣೆ ಅಥವಾ ಕೊಳವೆ ರೋಗಕ್ಕೆ ಕಾರಣ.  ಅಗ್ರೋಮೈಜಿóಡೀಗೆ ಸೇರಿದ ಅಗ್ರೋಮೈಜû ಫೇಸಿಯೋಲಿ ಅಲಸಂದೆ (ತಡಗುಣಿ) ಬೆಳೆಯ ಮುಖ್ಯವಾದ ಪೀಡೆ. ಇದರ ಪ್ರೌಢಾವಸ್ಥೆಯ ನೊಣ ಸಾಮಾನ್ಯ ನೊಣವನ್ನು ಹೋಲುತ್ತದೆ. ಇದರ ತೆಳು ಹಳದಿ ಬಣ್ಣದಮರಿಹುಳುಗಳು (ಮ್ಯಾಗಟ್) ಎಳೆಗಿಡದ ಮೃದು ಕಾಂಡವನ್ನು ಕೊರೆಯುವುದರಿಂದ ಗಿಡ ಬಾಡುತ್ತದೆಯಲ್ಲದೆ ಕೆಲವು ವೇಳೆ ಸಾಯುವುದೂ ಉಂಟು. ತಾಯಿ ನೊಣ ಮೃದುಕಾಂಡದ ಮೇಲೆ ತೊಗಟೆಯೊಳಗೆ ಮೊಟ್ಟೆಗಳನ್ನು ಇಡುತ್ತದೆ. ಆಂಥೊಮೈಯಿಡೀ ಕುಟುಂಬಕ್ಕೆ ಸೇರಿದ ಅಥೆರಿಗೋನ ಇಂಡಿಕ ಎಂಬ ನೊಣ ಜೋಳದ ಬೆಳೆಯ ಎಳೆ ಸಸಿಗಳಿಗೆ ಮಾರಕ. ಇದು ಕಪ್ಪು ಬಣ್ಣದ ಸಣ್ಣ ನೊಣ; ಮೊಳೆಯುತ್ತಿರುವ ಸಸಿಯ ಮೆತುವಾದ ಕಾಂಡದ ಮೇಲೆ ಮೊಟ್ಟೆಗಳನ್ನಿಡುತ್ತದೆ.  ಮರಿಹುಳುಗಳು ಕಾಂಡವನ್ನು ಕೊರೆದು ಸತ್ತ ಸುಳಿಗಳಿಗೆ (ಡೆಡ್ ಹಾಟ್ರ್ಸ್) ಕಾರಣವಾಗುತ್ತದೆ.  ಭತ್ತಕ್ಕೆ ಅಥೆರಿಗೋನ ಒರೈಜೆó ಎಂಬ ನೊಣದಿಂದಲೂ ನವಣೆಗೆ ಅ. ಡಿಸ್ಟ್ರಕ್ಟರ್ ಎಂಬ ನೊಣದಿಂದಲೂ ಇದೇ ರೀತಿಯ ತೊಂದರೆಯುಂಟು.

(ಡಿ.ಎಸ್.)

 

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ